Google Go ಇದು ಸರಳವಾಗಿದೆ, ಇದನ್ನು ಬಳಸಿ ವೇಗವಾಗಿ ಹುಡುಕಬಹುದಾಗಿದೆ ಹಾಗೂ ಶೇಕಡಾ 40 ರಷ್ಟರವರೆಗಿನ ಡೇಟಾವನ್ನು ಉಳಿಸಲು ಹುಡುಕಾಟದ ಫಲಿತಾಂಶಗಳನ್ನು ಇದರಲ್ಲಿ ಆಪ್ಟಿಮೈಸ್ ಮಾಡಲಾಗುತ್ತದೆ.
ಇಂಟರ್ನೆಟ್ ನಿಧಾನವಾಗಿದ್ದಾಗಲೂ, ಸ್ಮಾರ್ಟ್‌ಫೋನ್‌ಗಳಲ್ಲಿ ಕಡಿಮೆ ಸ್ಥಳಾವಕಾಶವಿದ್ದರೂ Google Go ಸಹಾಯದಿಂದ ಕೂಡಲೇ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ. ಇದು 12MB ಗಾತ್ರದ್ದಾಗಿದ್ದು, ಇದನ್ನು ವೇಗವಾಗಿ ಡೌನ್‌ಲೋಡ್ ಮಾಡಬಹುದು ಹಾಗೂ ಇದು ನಿಮ್ಮ ಫೋನಿನಲ್ಲಿ ಸ್ವಲ್ಪವೇ ಸ್ವಲ್ಪ ಸ್ಥಳಾವಕಾಶವನ್ನು ಬಳಸಿಕೊಳ್ಳುತ್ತದೆ.
ಕಡಿಮೆ ಟೈಪ್ ಮಾಡಿ, ಹೆಚ್ಚು ವಿಷಯಗಳನ್ನು ಕಂಡುಕೊಳ್ಳಿ. ಟ್ರೆಂಡ್‍ನಲ್ಲಿರುವ ಪ್ರಶ್ನೆಗಳು ಮತ್ತು ವಿಷಯಗಳನ್ನು ಟ್ಯಾಪ್ ಮಾಡುವ ಮೂಲಕ ಅಥವಾ ನೀವು ಹುಡುಕಬೇಕೆಂದಿರುವುದನ್ನು ನಿಮ್ಮದೇ ಧ್ವನಿಯಲ್ಲಿ ಹೇಳುವ ಮೂಲಕ ಬಹಳ ಅಮೂಲ್ಯವಾದ ನಿಮ್ಮ ಸಮಯವನ್ನು ಉಳಿಸಿ.
ಪದಗಳನ್ನು Google ಓದುವ ಹಾಗೆ ಮಾಡಿ: ಯಾವುದೇ ವೆಬ್ ಪುಟಗಳಲ್ಲಿರುವ ಪದಗಳನ್ನು ಆಲಿಸಿ, ಹೌದು ಪದಗಳು ಹೈಲೈಟ್ ಆಗುತ್ತಾ ಹೋದಂತೆ ಅವುಗಳನ್ನು ನೀವು ಆಲಿಸಬಹುದು, ಹೀಗೆ ನೀವು ಹಾಯಾಗಿ ಒಂದು ವಿಷಯವನ್ನು ಅನುಸರಿಸಬಹುದು.
ನಿಮಗೆ ಬೇಕಾಗಿರುವುದೆಲ್ಲಾ ಒಂದೇ ಆ್ಯಪ್‌ನಲ್ಲಿ. ನಿಮ್ಮ ಅಚ್ಚುಮೆಚ್ಚಿನ ಆ್ಯಪ್‌ಗಳನ್ನು, ವೆಬ್‌ಸೈಟ್‌ಗಳನ್ನು ಮತ್ತು ಚಿತ್ರಗಳನ್ನು, ವೀಡಿಯೊಗಳನ್ನು ಹಾಗೂ ನೀವು ಕಾಳಜಿವಹಿಸುವ ಮಾಹಿತಿಯನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಹುಡುಕಿ.
ಯಾವುದು ಜನಪ್ರಿಯವೋ ಹಾಗೂ ಟ್ರೆಂಡಿಂಗ್ ಆಗುತ್ತಿದೆಯೋ, ಅದನ್ನು ಮಿಸ್ ಮಾಡಿಕೊಳ್ಳಬೇಡಿ. ಹುಡುಕಾಟ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಇತ್ತೀಚಿಗೆ ಟ್ರೆಂಡ್ ಆಗುತ್ತಿರುವ ಟಾಪಿಕ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ.
ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಹಂಚಿಕೊಳ್ಳುವುದಕ್ಕಾಗಿ, ಸರಿಯಾದ ಗ್ರೀಟಿಂಗ್‌ಗಳನ್ನು ಹುಡುಕಿ. "ಚಿತ್ರಗಳು" ಅಥವಾ "GIFಗಳು" ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮಗೆ ಬೇಕಾದ ಆ್ಯನಿಮೇಟೆಡ್ ಗ್ರೀಟಿಂಗ್‌ಗಳ ಮೂಲಕ ಚಾಟ್ ಅನ್ನು ಆಪ್ತಗೊಳಿಸಿ.
ಭಾಷೆಗಳನ್ನು ಸುಲಭವಾಗಿ ಬದಲಿಸಿ. ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ಯಾವುದೇ ಸಮಯದಲ್ಲಿ ಎರಡನೆಯ ಭಾಷೆಗೆ/ಭಾಷೆಯಿಂದ ಬದಲಾಯಿಸಲು ಆ ಎರಡನೆಯ ಭಾಷೆಯನ್ನು ಸೆಟ್ ಮಾಡಿ.
ಇಂಟರ್ನೆಟ್‍ನಲ್ಲಿ ಏನನ್ನು ಬೇಕಾದರೂ ಹುಡುಕಿ, ಅದನ್ನು ನಿಮಗಾಗಿ ಸುಲಭವಾಗಿ ಹುಡುಕಲು Google Go ಸಹಾಯ ಮಾಡುತ್ತದೆ!
ಅಪ್‌ಡೇಟ್ ದಿನಾಂಕ
ನವೆಂ 7, 2024