Signal ಎಂಬುದು ಒಂದು ಮೆಸೇಜಿಂಗ್ ಆ್ಯಪ್ ಆಗಿದ್ದು, ಗೌಪ್ಯತೆಯು ಇದರ ಕೇಂದ್ರವಾಗಿದೆ. ನಿಮ್ಮ ಸಂವಹನವನ್ನು ಸಂಪೂರ್ಣವಾಗಿ ಖಾಸಗಿಯಾಗಿಡುವ ಪ್ರಬಲವಾದ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿರುವ ಇದು ಬಳಸಲು ಉಚಿತವಾಗಿದೆ ಮತ್ತು ಸುಲಭವಾಗಿದೆ.
•ಪಠ್ಯಗಳು, ಧ್ವನಿ ಸಂದೇಶಗಳು, ಫೊಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು, GIF ಗಳು ಮತ್ತು ಫೈಲ್‌ಗಳನ್ನು ಉಚಿತವಾಗಿ ಕಳುಹಿಸಿ. Signal ನಿಮ್ಮ ಫೋನ್‌ನ ಡೇಟಾ ಸಂಪರ್ಕವನ್ನು ಬಳಸುತ್ತದೆ, ಆದ್ದರಿಂದ ನೀವು SMS ಮತ್ತು MMS ಶುಲ್ಕವನ್ನು ತಪ್ಪಿಸಬಹುದು.
• ಸುಸ್ಪಷ್ಟ ಎನ್‌ಕ್ರಿಪ್ಟ್ ಆದ ಧ್ವನಿ ಮತ್ತು ವಿಡಿಯೋ ಕರೆಗಳೊಂದಿಗೆ ನಿಮ್ಮ ಸ್ನೇಹಿತರಿಗೆ ಕರೆ ಮಾಡಿ. ಗ್ರೂಪ್ ಕಾಲ್‌ಗಳು 40 ಜನರ ತನಕ ಬೆಂಬಲಿಸುತ್ತವೆ.
• ಗ್ರೂಪ್ ಚಾಟ್‌ಗಳ ಮೂಲಕ 1,000 ಜನರ ತನಕ ಸಂಪರ್ಕದಲ್ಲಿರಿ. ಅಡ್ಮಿನ್ ಅನುಮತಿ ಸೆಟ್ಟಿಂಗ್‌ಗಳ ಮೂಲಕ ಯಾರು ಪೋಸ್ಟ್ ಮಾಡಬಹುದು ಎಂಬುದನ್ನು ನಿಯಂತ್ರಿಸಿ ಮತ್ತು ಗ್ರೂಪ್ ಸದಸ್ಯರನ್ನು ನಿರ್ವಹಿಸಿ.
• 24 ಗಂಟೆಗಳ ನಂತರ ಮರೆಯಾಗುವ ಚಿತ್ರ, ಪಠ್ಯ ಮತ್ತು ವೀಡಿಯೋ ಸ್ಟೋರೀಸ್ ಅನ್ನು ಹಂಚಿಕೊಳ್ಳಿ. ಪ್ರತಿ ಸ್ಟೋರಿಯನ್ನು ಯಾರು ನೋಡಬಹುದು ಎಂಬುದರ ಉಸ್ತುವಾರಿಯನ್ನು ಗೌಪ್ಯತಾ ಸೆಟ್ಟಿಂಗ್‌ಗಳು ನಿಮಗೆ ವಹಿಸುತ್ತವೆ.
• ನಿಮ್ಮ ಗೌಪ್ಯತೆಗಾಗಿ Signal ಅನ್ನು ನಿರ್ಮಿಸಲಾಗಿದೆ. ನಿಮ್ಮ ಬಗ್ಗೆ ಅಥವಾ ನೀವು ಯಾರೊಂದಿಗೆ ಮಾತನಾಡುತ್ತಿದ್ದೀರೋ ಅವರ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನಮ್ಮ ಓಪನ್ ಸೋರ್ಸ್ Signal ಪ್ರೋಟೋಕಾಲ್ ಎಂದರೆ, ನಿಮ್ಮ ಮೆಸೇಜ್‌ಗಳನ್ನು ನಮಗೆ ಓದಲು ಸಾಧ್ಯವಿಲ್ಲ ಅಥವಾ ನಿಮ್ಮ ಕರೆಗಳನ್ನು ಆಲಿಸಲು ಸಾಧ್ಯವಿಲ್ಲ. ಬೇರೆ ಯಾರಿಗೂ ಸಾಧ್ಯವಿಲ್ಲ. ಹಿಂಬಾಗಿಲ ಪ್ರವೇಶವಿಲ್ಲ, ಡೇಟಾ ಸಂಗ್ರಹಣೆಯಿಲ್ಲ, ಒಪ್ಪಂದಗಳಿಲ್ಲ.
• Signal ಸ್ವತಂತ್ರವಾಗಿದೆ ಮತ್ತು ಲಾಭದ ಉದ್ದೇಶ ರಹಿತವಾಗಿದೆ; ವಿಭಿನ್ನ ರೀತಿಯ ಸಂಸ್ಥೆಯಿಂದ ವಿಭಿನ್ನ ರೀತಿಯ ತಂತ್ರಜ್ಞಾನವಾಗಿದೆ. 501c3 ಲಾಭದ ಉದ್ದೇಶ ರಹಿತವಾಗಿರುವ ನಾವು ದೇಣಿಗೆಗಳಿಂದ ಬೆಂಬಲಿತರಾಗಿದ್ದೇವೆಯೇ ಹೊರತು, ಜಾಹೀರಾತುದಾರರು ಅಥವಾ ಹೂಡಿಕೆದಾರರಿಂದ ಅಲ್ಲ.
• ಬೆಂಬಲ, ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ: https://support.signal.org/
ನಮ್ಮ ಸೋರ್ಸ್ ಕೋಡ್ ಪರಿಶೀಲಿಸಲು, ಭೇಟಿ ನೀಡಿ: https://github.com/signalapp
ನಮ್ಮನ್ನು ಇಲ್ಲಿ ಫಾಲೋ ಮಾಡಿ: Twitter @signalapp ಮತ್ತು Instagram @signal_app
ಅಪ್‌ಡೇಟ್ ದಿನಾಂಕ
ಡಿಸೆಂ 21, 2024