ಕಡಿಮೆ ದೃಷ್ಟಿ ಅಥವಾ ಕುರುಡುತನ ಹೊಂದಿರುವ ಜನರಿಗೆ ಕೆಲಸಗಳನ್ನು ವೇಗವಾಗಿ ಮತ್ತು ಹೆಚ್ಚು ಸುಲಭವಾಗಿ ಮಾಡುವುದಕ್ಕೆ ಸಹಾಯ ಮಾಡಲು Lookout ಕಂಪ್ಯೂಟರ್ ದೃಷ್ಟಿಕೋನ ಮತ್ತು ಜನರೇಟಿವ್ AI ಅನ್ನು ಬಳಸುತ್ತದೆ. ನಿಮ್ಮ ಫೋನ್‌ನ ಕ್ಯಾಮರಾವನ್ನು ಬಳಸಿಕೊಂಡು, Lookout ನಿಮ್ಮ ಸುತ್ತಮುತ್ತಲಿನ ಪ್ರಪಂಚದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ ಮತ್ತು ಪಠ್ಯ ಹಾಗೂ ಡಾಕ್ಯುಮೆಂಟ್‌ಗಳನ್ನು ಓದುವುದು, ಮೇಲ್ ಅನ್ನು ವಿಂಗಡಿಸುವುದು, ದಿನಸಿ ವಸ್ತುಗಳನ್ನು ಸ್ವಸ್ಥಾನದಲ್ಲಿಡುವುದು ಹಾಗೂ ಮುಂತಾದವುಗಳಂತಹ ದೈನಂದಿನ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.
ಕುರುಡರ ಮತ್ತು ಕಡಿಮೆ ದೃಷ್ಟಿಯುಳ್ಳ ಜನರ ಸಮುದಾಯದ ಜೊತೆಗಿನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ, ಪ್ರಪಂಚದ ಮಾಹಿತಿಯನ್ನು ಸಾರ್ವತ್ರಿಕವಾಗಿ ಎಲ್ಲರೂ ಆ್ಯಕ್ಸೆಸ್ ಮಾಡಬೇಕೆಂಬ Google ನ ಧ್ಯೇಯವನ್ನು Lookout ಬೆಂಬಲಿಸುತ್ತದೆ.
Lookout ಏಳು ಮೋಡ್‌ಗಳನ್ನು ನೀಡುತ್ತದೆ:
• <b>ಪಠ್ಯ:</b> ಪಠ್ಯವನ್ನು ಸ್ಕ್ಯಾನ್ ಮಾಡಿ ಹಾಗೂ ಮೇಲ್ ವಿಂಗಡಿಸುವುದು ಮತ್ತು ಚಿಹ್ನೆಗಳನ್ನು ಓದುವುದು, ಪಠ್ಯ ಮೋಡ್ ಅನ್ನು ಬಳಸಿಕೊಂಡು ಅದನ್ನು ಗಟ್ಟಿಯಾಗಿ ಓದುವಂತಹ ವಿಷಯಗಳನ್ನು ಕೇಳಿ.
• <b>ಡಾಕ್ಯುಮೆಂಟ್‌ಗಳು:</b> ಡಾಕ್ಯುಮೆಂಟ್‌ಗಳ ಮೋಡ್ ಅನ್ನು ಬಳಸಿಕೊಂಡು ಪಠ್ಯ ಅಥವಾ ಕೈಬರಹದ ಸಂಪೂರ್ಣ ಪುಟವನ್ನು ಕ್ಯಾಪ್ಚರ್ ಮಾಡಿ. 30 ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ.
• <b>ಎಕ್ಸ್‌ಪ್ಲೋರ್ ಮಾಡಿ:</b> ಎಕ್ಸ್‌ಪ್ಲೋರ್ ಮೋಡ್ ಅನ್ನು ಬಳಸಿಕೊಂಡು ಸುತ್ತಮುತ್ತಲಿನ ವಸ್ತುಗಳು, ಜನರು ಮತ್ತು ಪಠ್ಯವನ್ನು ಗುರುತಿಸಿ.
• <b>ಕರೆನ್ಸಿ:</b> ಯುಎಸ್ ಡಾಲರ್‌ಗಳು, ಯೂರೋಗಳು ಮತ್ತು ಭಾರತೀಯ ರೂಪಾಯಿಗಳಿಗೆ ಬೆಂಬಲದ ಜೊತೆಗೆ ಕರೆನ್ಸಿ ಮೋಡ್ ಅನ್ನು ಬಳಸಿಕೊಂಡು ತ್ವರಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಬ್ಯಾಂಕ್‌ನೋಟುಗಳನ್ನು ಗುರುತಿಸಿ.
• <b>ಆಹಾರದ ಲೇಬಲ್‌ಗಳು:</b> ಆಹಾರ ಲೇಬಲ್‌ಗಳ ಮೋಡ್ ಅನ್ನು ಬಳಸಿಕೊಂಡು ಪ್ಯಾಕ್ ಮಾಡಲಾದ ಆಹಾರಗಳನ್ನು ಅವುಗಳ ಲೇಬಲ್ ಅಥವಾ ಬಾರ್‌ಕೋಡ್‌ಗಳ ಮೂಲಕ ಗುರುತಿಸಿ. 20 ಕ್ಕೂ ಹೆಚ್ಚಿನ ದೇಶಗಳಲ್ಲಿ ಲಭ್ಯವಿದೆ.
• <b>ಹುಡುಕಿ:</b> ಹುಡುಕಿ ಮೋಡ್ ಅನ್ನು ಬಳಸಿಕೊಂಡು ಬಾಗಿಲುಗಳು, ಬಾತ್‌ರೂಂಗಳು, ಕಪ್‌ಗಳು, ವಾಹನಗಳು ಹಾಗೂ ಮುಂತಾದವುಗಳನ್ನು ಹುಡುಕಲು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ಕ್ಯಾನ್ ಮಾಡಿ. ಸಾಧನದ ಸಾಮರ್ಥ್ಯಗಳನ್ನು ಆಧರಿಸಿ, ವಸ್ತುವಿನ ದಿಕ್ಕು ಮತ್ತು ದೂರವನ್ನು ಹುಡುಕಿ ಮೋಡ್ ನಿಮಗೆ ತಿಳಿಸುತ್ತದೆ.
• <b>ಚಿತ್ರಗಳು:</b> ಚಿತ್ರಗಳ ಮೋಡ್ ಅನ್ನು ಬಳಸಿಕೊಂಡು ಚಿತ್ರದ ಕುರಿತು ಪ್ರಶ್ನೆಗಳನ್ನು ಕ್ಯಾಪ್ಚರ್ ಮಾಡಿ, ವಿವರಿಸಿ ಮತ್ತು ಕೇಳಿ. ಚಿತ್ರ ವಿವರಣೆಗಳು ಮತ್ತು ಪ್ರಶ್ನೋತ್ತರಗಳು ಜಾಗತಿಕವಾಗಿ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿವೆ.
Lookout, 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ ಮತ್ತು Android 6 ಹಾಗೂ ನಂತರದ ಆವೃತ್ತಿಯ ಸಾಧನಗಳಲ್ಲಿ ರನ್ ಆಗುತ್ತದೆ. 2GB ಅಥವಾ ಹೆಚ್ಚಿನ RAM ಹೊಂದಿರುವ ಸಾಧನಗಳನ್ನು ಶಿಫಾರಸು ಮಾಡಲಾಗಿದೆ.
ಸಹಾಯ ಕೇಂದ್ರದಲ್ಲಿ Lookout ಕುರಿತು ಇನ್ನಷ್ಟು ತಿಳಿಯಿರಿ:
https://support.google.com/accessibility/android/answer/9031274