Google Maps Go ಎಂಬುದು ಮೂಲ Google Maps ಆ್ಯಪ್‌ನ ಲೈಟ್‌ವೆಯ್ಟ್ ಪ್ರೊಗ್ರೆಸ್ಸಿವ್ ವೆಬ್ ಆ್ಯಪ್ ಆವೃತ್ತಿಯಾಗಿದೆ.
ಈ ಆವೃತ್ತಿಗೆ Chrome ಅಗತ್ಯವಿದೆ (ನೀವು Chrome ಅನ್ನು ಇನ್‌ಸ್ಟಾಲ್ ಮಾಡಲು ಬಯಸದಿದ್ದರೆ, ಬದಲಿಗೆ ನಿಮ್ಮ ಬ್ರೌಸರ್‌ನಲ್ಲಿ www.google.com/maps ಅನ್ನು ಬಳಸಿ).
ಸಂಪೂರ್ಣ Google Maps ಆ್ಯಪ್‌ಗಿಂತ ನಿಮ್ಮ ಸಾಧನದಲ್ಲಿ 100 ಪಟ್ಟು ಕಡಿಮೆ ಸ್ಥಳಾವಕಾಶವನ್ನು ತೆಗೆದುಕೊಳ್ಳುತ್ತದೆ, ನಿಮ್ಮ ಸ್ಥಳ, ನೈಜ-ಸಮಯದ ಟ್ರಾಫಿಕ್ ಅಪ್‌ಡೇಟ್‌ಗಳು, ಮಾರ್ಗ ನಿರ್ದೇಶನಗಳು ಮತ್ತು ರೈಲು, ಬಸ್ ಹಾಗೂ ನಗರ ಸಾರಿಗೆ ಕುರಿತಾದ ಮಾಹಿತಿಯನ್ನು ಒದಗಿಸಲು ವೇಗವನ್ನು ರಾಜಿ ಮಾಡಿಕೊಳ್ಳದೆಯೇ ಸೀಮಿತ ಮೆಮೊರಿ ಹೊಂದಿರುವ ಸಾಧನಗಳಲ್ಲಿ ಮತ್ತು ವಿಶ್ವಾಸಾರ್ಹವಲ್ಲದ ನೆಟ್‌ವರ್ಕ್‌ಗಳಲ್ಲಿ ಸರಾಗವಾಗಿ ರನ್ ಆಗಲು Google Maps Go ಅನ್ನು ವಿನ್ಯಾಸಗೊಳಿಸಲಾಗಿದೆ. ನೀವು ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತೆಯೇ ಲಕ್ಷಾಂತರ ಸ್ಥಳಗಳ ಕುರಿತಾದ ಮಾಹಿತಿಯನ್ನು ಸಹ ಹುಡುಕಬಹುದು ಮತ್ತು ಕಂಡುಕೊಳ್ಳಬಹುದು.
• ದ್ವಿಚಕ್ರ ವಾಹನಗಳು, ಮೆಟ್ರೋ, ಬಸ್ಸುಗಳು, ಟ್ಯಾಕ್ಸಿ, ನಡಿಗೆ ಮತ್ತು ದೋಣಿಗಳ ಮಾರ್ಗಗಳನ್ನು ಸಂಯೋಜಿಸುವ ಅತೀ ವೇಗದ ಮಾರ್ಗವನ್ನು ಹುಡುಕಿ
• ನಗರ ಸಾರ್ವಜನಿಕ ಸಾರಿಗೆಯ ಲೈವ್ ವೇಳಾಪಟ್ಟಿಯನ್ನು ಹೊಂದಿರುವ ಮೆಟ್ರೊ, ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡಿ
• ಹಂತ ಹಂತದ ಮಾರ್ಗ ನಿರ್ದೇಶನಗಳನ್ನು ಹೊಂದಿರುವ ಮಾರ್ಗದ ಪೂರ್ವವೀಕ್ಷಣೆ ಸಹಾಯದಿಂದ ನಿಮ್ಮ ಪ್ರವಾಸವನ್ನು ಮುಂಚಿತವಾಗಿ ಪ್ಲ್ಯಾನ್ ಮಾಡಿಕೊಳ್ಳಲು ನೆರವಾಗುತ್ತದೆ
• ನೈಜ-ಸಮಯದ ಟ್ರಾಫಿಕ್ ಮಾಹಿತಿ ಮತ್ತು ಟ್ರಾಫಿಕ್ ನಕ್ಷೆಗಳ ಸಹಾಯದಿಂದ ನೀವು ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ಹೋಗಿ
• ಹೊಸ ಸ್ಥಳಗಳನ್ನು ಅನ್ವೇಷಿಸಿ ಹಾಗೂ ಎಕ್ಸ್‌ಪ್ಲೋರ್ ಮಾಡಿ
• ಸ್ಥಳೀಯ ರೆಸ್ಟೋರೆಂಟ್‌ಗಳು, ವ್ಯಾಪಾರಗಳು ಮತ್ತು ಹತ್ತಿರದ ಇತರ ಸ್ಥಳಗಳನ್ನು ಹುಡುಕಿ ಮತ್ತು ಕಂಡುಕೊಳ್ಳಿ
• ಗ್ರಾಹಕರ ವಿಮರ್ಶೆಗಳನ್ನು ಓದುವ ಮೂಲಕ ಮತ್ತು ಆಹಾರದ ಚಿತ್ರಗಳನ್ನು ವೀಕ್ಷಿಸುವ ಮೂಲಕ ಹೋಗಬೇಕಾದ ಉತ್ತಮ ಸ್ಥಳಗಳನ್ನು ನಿರ್ಧರಿಸಿ
• ನಿರ್ದಿಷ್ಟ ಸ್ಥಳದ ಫೋನ್ ಸಂಖ್ಯೆ ಮತ್ತು ವಿಳಾಸವನ್ನು ಹುಡುಕಿ
• ನಿಮಗೆ ಬೇಕಾದ ಅಥವಾ ಪದೇ ಪದೇ ಹೋಗಲು ಬಯಸುವ ಸ್ಥಳಗಳನ್ನು ಸೇವ್ ಮಾಡಿ ಮತ್ತು ನಂತರ ನಿಮ್ಮ ಮೊಬೈಲ್‌ನಿಂದ ಅವುಗಳನ್ನು ತ್ವರಿತವಾಗಿ ಕಂಡುಕೊಳ್ಳಿ
• 70+ ಭಾಷೆಗಳಲ್ಲಿ ಲಭ್ಯವಿದೆ
• 200 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಸಮಗ್ರ, ನಿಖರ ನಕ್ಷೆಗಳು (ಉಪಗ್ರಹ ಮತ್ತು ಭೂಪ್ರದೇಶ ವೀಕ್ಷಣೆ ಒಳಗೊಂಡಿದೆ)
• 20,000 ಕ್ಕೂ ಹೆಚ್ಚಿನ ನಗರಗಳಿಗೆ ಸಂಬಂಧಿಸಿದ ಸಾರ್ವಜನಿಕ ಸಾರಿಗೆ ಮಾಹಿತಿ
• 100 ಮಿಲಿಯನ್‌ಗೂ ಹೆಚ್ಚಿನ ಸ್ಥಳಗಳಿಗೆ ಸಂಬಂಧಿಸಿದ ವಿವರವಾದ ವ್ಯಾಪಾರದ ಮಾಹಿತಿ
____
ಬೀಟಾ ಟೆಸ್ಟರ್ ಆಗಿ: https://goo.gl/pvdYqQ
ಅಪ್‌ಡೇಟ್ ದಿನಾಂಕ
ಅಕ್ಟೋ 24, 2023